ಒಂದು ಲಸಿಕಾ(ವ್ಯಾಕ್ಸಿನೇಷನ್) ಕಾರ್ಡ್
ಲಸಿಕಾ(ವ್ಯಾಕ್ಸಿನೇಷನ್) ಕಾರ್ಡ್ (ಕೆಲವೊಮ್ಮೆ ಇದನ್ನು ಇಮ್ಮ್ಯುನೈಸೇಷನ್ ಕಾರ್ಡ್ ಎನ್ನಲಾಗುತ್ತದೆ) ಎಂದರೆ ನಿಮ್ಮ ಮಗು ಪಡೆದ ಎಲ್ಲಾ ಲಸಿಕೆಗಳ ಮಾಹಿತಿಯ ಚೀಟಿಯಾಗಿದ್ದು ಇದರಲ್ಲಿ ಮುಂಬರುವ ಲಸಿಕೆಗಳ ಬಗ್ಗೆ ನೀವು ಗಮನವಿಡಲು ಸಹ ಇದು ಸಹಕಾರಿಯಾಗಿದೆ. ಈ ಕಾರ್ಡ್ ಸಹಾಯದಿಂದ ನೀವು ಯಾವುದೇ ಡೋಸ್ ಮರೆಯುವುದಿಲ್ಲ.
ಸಾಮಾನ್ಯವಾಗಿ, ಮಕ್ಕಳ ವೈದ್ಯರು ನಿಮಗೆ ಈ ಲಸಿಕಾ ಕಾರ್ಡ್ ನೀಡುತ್ತಾರೆ. 18 ವರ್ಷಗಳವರೆಗೆ ಶಿಫಾರಸ್ಸು ಮಾಡಲಾದ ಲಸಿಕೆಗಳ ಬಗ್ಗೆ ಮಾಹಿತಿಯನ್ನು ತಿಳಿಯಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ.
ಲಸಿಕಾ ಕಾರ್ಡ್ ನಿಮ್ಮ ಮಗುವಿನ ಆರೋಗ್ಯದ ಪಾಸ್ಪೋರ್ಟ್ ಇದ್ದಂತೆ.
ಇಂದೇ ನಿಮ್ಮ ಮಗುವಿನ ಲಸಿಕಾ ಕಾರ್ಡ್ ಒಮ್ಮೆ ಪರಿಶೀಲಿಸಿ ಮತ್ತು ನಿಮ್ಮ ಲಸಿಕೆಯನ್ನು ಸಕಾಲಕ್ಕೆ ಪೂರ್ಣಗೊಳಿಸಲು ನಿಮ್ಮ ಮಕ್ಕಳ ವೈದ್ಯರನ್ನು ಭೇಟಿ ಮಾಡಿ.