ಈ ಹಿಂದೆ ನಿಮ್ಮ ಮಗು ಡಿಫ್ತಿರಿಯಾ ಅಂಶವಿರುವ ಲಸಿಕೆಯನ್ನು ತೆಗೆದುಕೊಂಡ ನಂತರ ಯಾವುದೇ ರೀತಿಯ ಅಲ್ಲರ್ಜಿ ಪರಿಣಾಮಗಳನ್ನು ಅನುಭವಿಸಿದ್ದಲ್ಲಿ ನೀವು ಮುಂದಿನ ಡಿಫ್ತಿರಿಯಾ ಲಸಿಕೆಯ ಡೋಸ್ ಕೊಡಿಸುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆಯಿರಿ.
ಡಿಫ್ತಿರಿಯಾ ಲಸಿಕೆಗಳನ್ನು ತೀವ್ರ ಜ್ವರ ಇದ್ದಾಗ ಕೊಡಬಾರದು(ಒಂದು ವಾರದವರೆಗೆ ನಿರಂತರವಾಗಿರುವ ಜ್ವರ). ಯಾವುದೇ ಲಸಿಕೆಗಳನ್ನು ನೀಡಿದ ನಂತರ ಅಲ್ಲರ್ಜಿಗಳು ಅಥವಾ ಅಸ್ವಸ್ಥತೆಗಳ ಕುರಿತು ನಿಮ್ಮ ಮಕ್ಕಳ ತಜ್ಞರಿಗೆ ಒಮ್ಮೆ ತಿಳಿಸಿ.