ಇನ್ಫ್ಲುಯೆಂಜಾ ತಡೆಗಟ್ಟಲು ಇರುವ ಪರಿಣಾಮಕಾರಿ ವಿಧಾನಗಳಲ್ಲಿ ಇನ್ಫ್ಲುಯೆಂಜಾ ಲಸಿಕೆ ಒಂದಾಗಿದೆ. ಇದನ್ನು ಹೊರತುಪಡಿಸಿ, ಈ ಕೆಳಗಿನ ಅಭ್ಯಾಸಗಳಿಂದಲೂ ಇದನ್ನು ತಡೆಗಟ್ಟಬಹುದು:
ಇನ್ಫ್ಲುಯೆಂಜಾ ರೋಗಿಗಳೊಂದಿಗೆ ನೇರ ಸಂಪರ್ಕ ಮಾಡದಿರಿ. ಅವರೊಂದಿಗೆ ಕನಿಷ್ಠ 6 ಅಡಿಯ ಅಂತರ ಕಾಯ್ದುಕೊಳ್ಳಿ.
ಕೆಮ್ಮಿದಾಗ ಅಥವಾ ಸೀನಿದಾಗ, ನಿಮ್ಮ ಮೂಗನ್ನು ಕರವಸ್ತ್ರ ಅಥವಾ ಟಿಶ್ಯೂ ನಿಂದ ಮುಚ್ಚಿಕೊಳ್ಳಿರಿ
ನಿಮ್ಮ ಕೈಗಳನ್ನು ಚೆನ್ನಾಗಿ ಸಾಬೂನು ಮತ್ತು ನೀರಿನಿಂದ ತೊಳೆಯಿರಿ.
ನಿಮ್ಮ ಮುಖ ಹಾಗೂ ಕಿವಿಗಳನ್ನು ಮುಟ್ಟಬೇಡಿ.
ಒಂದುವೇಳೆ ನೀವು ಇನ್ಫ್ಲುಯೆಂಜಾ ಸೋಂಕಿನಿಂದ ಬಳಲುತ್ತಿದ್ದರೆ ಈ ಕೆಳಗಿನವುಗಳನ್ನು ಅನುಸರಿಸಿ:
ಜನರ ಸಂಪರ್ಕದಿಂದ ದೂರವಿರಿ
ನಿಮ್ಮ ಪರಿಸರವನ್ನು ಮತ್ತು ನೀವು ಮುಟ್ಟ ಬಹುದಾದ ವಸ್ತುಗಳನ್ನು ಸ್ವಚ್ಛವಾಗಿಡಿ ಮತ್ತು ಸೋಂಕುರಹಿತವಾಗಿರಿಸಿ.
ಜ್ವರ ಕಡಿಮೆಯಾದ ಕನಿಷ್ಠ 24 ಗಂಟೆಗಳವರೆಗೆ ಮನೆಯಲ್ಲಿಯೇ ಉಳಿಯಿರಿ.