ಭೇದಿಯು ಅನೇಕ ವೈರಾಣುಗಳು ಮತ್ತು ಬ್ಯಾಕ್ಟೀರಿಯಾದಿಂದ ಉಂಟಾಗಬಹುದು. ಅದಾಗಿಯೂ ಆಸ್ಪತ್ರೆ ಆರೈಕೆಗೆ ಕಾರಣವಾಗುವ ತೀವ್ರ ನಿತ್ರಾಣದ ಅತಿಸಾರಭೇದಿಗೆ ರೋಟಾವೈರಸ್ ಬಹಳ ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ರೋಟಾವೈರಸ್ ವಿರುದ್ಧ ಲಸಿಕೆಯು ನಿಮ್ಮ ಮಗುವನ್ನು ರೋಟಾ ವೈರಸ್ ನಿಂದ ಮಾತ್ರ ಉಂಟಾಗಬಲ್ಲ ನಿತ್ರಾಣ ಅತಿಸಾರಭೇದಿಯಿಂದ ಮತ್ತು ಆಸ್ಪತ್ರೆ ಆರೈಕೆಯಿಂದ ರಕ್ಷಿಸುತ್ತದೆ.