ಇಲ್ಲ, ಪೋಲಿಯೊಗೆ ಯಾವುದೇ ಚಿಕಿತ್ಸೆಯಿಲ್ಲ. ಆದರೆ ಸೂಕ್ತ ಲಸಿಕೆಯೊಂದಿಗೆ ಮಗುವಿನ ರೋಗನಿರೋಧಕತೆಯನ್ನು ಹೆಚ್ಚಿಸುವ ಮೂಲಕ ಪೋಲಿಯೊ ರೋಗವನ್ನು ನಿಯಂತ್ರಿಸಬಹುದು.
You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.
Agree Agree Agree Stayಪೋಲಿಯೊ ಅಥವಾ ಪೋಲಿಯೊ ಮಯಲೈಟಿಸ್ ಒಂದು ಸಾಂಕ್ರಾಮಿಕ ವೈರಾಣುವಿನ ರೋಗವಾಗಿದ್ದು, ಇದು ಪಾರ್ಶ್ವವಾಯು, ಶಾಶ್ವತ ವಿಕಲಾಂಗತೆಗೆ ಮತ್ತು ಕೆಲವೊಮ್ಮೆ ಸಾವಿಗೆ ಕಾರಣವಾಗುತ್ತದೆ. ರೋಗದ ವಿರುದ್ಧ ರಕ್ಷಣೆ ಪಡೆಯಲು ಪೋಲಿಯೊ ಲಸಿಕೆ ಒಂದು ಪರಿಣಾಮಕಾರಿ ವಿಧಾನವಾಗಿದೆ.
ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.
ಇಂದೇ ಪೋಲಿಯೊ ಲಸಿಕೆ(ವ್ಯಾಕ್ಸಿನೇಷನ್) ಬಗ್ಗೆ ನಿಮ್ಮ ವೈದ್ಯರೊಂದಿಗೆ ಮಾತನಾಡಿ.
ಲಸಿಕೆಯನ್ನು ಒಳಗೊಂಡಂತೆ ಯಾವುದೇ ಔಷಧಿಯೊಂದಿಗೆ ಅಡ್ಡ ಪರಿಣಾಮಗಳು ಇರುತ್ತವೆ. ಆದರೆ ಸಾಮಾನ್ಯವಾಗಿ ಅವು ಬಹಳ ಸೌಮ್ಯ ಸ್ವರೂಪದ್ದಾಗಿರುತ್ತದೆ ಮತ್ತು ತನ್ನಷ್ಟಿಗೆ ತಾನೇ ಕಡಿಮೆಯಾಗುತ್ತದೆ.
ಐಪಿವಿ ಪಡೆದುಕೊಂಡವರಲ್ಲಿ ಕೆಲವೊಮ್ಮೆ ಸೂಜಿ ಚುಚ್ಚಿದ ಜಾಗದಲ್ಲಿ ನೋವು ಕಾಣಿಸಿಕೊಳ್ಳಬಹುದು. ಇದುವರೆಗೆ ಐಪಿವಿ ಇಂದ ಯಾವುದೇ ಗಂಭೀರ ಪರಿಣಾಮಗಳು ಕಂಡುಬಂದಿಲ್ಲ.
ಮಗು ಜನಿಸಿದ ನಂತರ ಓರಲ್ ಪೋಲಿಯೊ ವ್ಯಾಕ್ಸೀನ್(ಒಪಿವಿ) ಮೊದಲ ಡೋಸ್ ನೀಡಲಾಗುತ್ತದೆ
ಜನನದ ಓಪಿವಿ ಡೋಸ್ ನಂತರ, ಇನ್ಯಾಕ್ಟಿವೇಟೆಡ್ ಪೋಲಿಯೊ ವೈರಸ್(ಐಪಿವಿ) ಚುಚ್ಚುಮದ್ದುಗಳ ಲಸಿಕೆಯು ಬಹಳ ಮುಖ್ಯ ಮತ್ತು ಇದನ್ನು 6 ವಾರಗಳ ನಂತರದಿಂದ ಮಗುವಿಗೆ ನಿಯಮಿತವಾಗಿ ಕೊಡಲಾಗುತ್ತದೆ. ಐಪಿವಿ ಒಳಗೊಂಡಿರುವ ಲಸಿಕೆಗಳು ಒಂದೇ ಆಗಿ ಬರಬಹುದು ಅಥವಾ ಇತರ ಸಂಯೋಜಿತ ಲಸಿಕೆಯಾಗಿ ಬರಬಹುದು. ಇದಕ್ಕೆ ಹೆಚ್ಚುವರಿಯಾಗಿ, ರಾಷ್ಟ್ರೀಯ ಹಾಗೂ ಉಪರಾಷ್ಟ್ರೀಯ ಪಲ್ಸ್ ಪೋಲಿಯೊ ದಿನಗಳಲ್ಲಿ ಎಲ್ಲ ಪೋಷಕರೂ ಸಹ ತಮ್ಮ ಮಕ್ಕಳಿಗೆ ಪೋಲಿಯೊ ಲಸಿಕೆಯನ್ನು ಹಾಕಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಒಮ್ಮೆ ನಿಮ್ಮ ವೈದ್ಯರನ್ನು ಸಂಪರ್ಕಿಸಿ.
ಪೋಲಿಯೊ ವೈರಾಣುವಿನಿಂದ ಸೋಂಕಿತಗೊಂಡ ಪ್ರತಿಯೊಬ್ಬ ವ್ಯಕ್ತಿಯು ಲಕ್ಷಣಗಳನ್ನು ಹೊಂದಿರುವುದಿಲ್ಲ. ಅದಾಗಿಯೂ, ಪ್ರತಿ ೪ ಸೋಂಕಿತರಲ್ಲಿ ರಲ್ಲಿ 1 ವ್ಯಕ್ತಿಯು ಫ್ಲೂ ರೀತಿಯ ಲಕ್ಷಣಗಳಿಂದ ಬಳಲುತ್ತಾರೆ.
ಇವುಗಳಲ್ಲಿ :
ಇವು ಬಹಳ ಸೌಮ್ಯ ಲಕ್ಷಣಗಳಾಗಿದ್ದು 2 ರಿಂದ 5 ದಿನಗಳಿಗಿಂತ ಹೆಚ್ಚಾಗಿ ಇರುವುದಿಲ್ಲ.
ಸೋಂಕಿನ ತೀವ್ರತೆಯನ್ನು ಆಧರಿಸಿ, ಕೆಲವರು ಮೆದುಳುಬಳ್ಳಿ ಮತ್ತು ಮೆದುಳಿನ ಮೇಲೆ ಪರಿಣಾಮ ಬೀರುವ ತೀವ್ರ ಲಕ್ಷಣಗಳನ್ನು ಅನುಭವಿಸಬಹುದು. ಅವುಗಳೆಂದರೆ:
ಪ್ಯಾರಸ್ಥೇಷಿಯಾ, ಇದರಲ್ಲಿ ಸೂಜಿಗಳು ಚುಚ್ಚಿದ ಅನುಭವ ಇರುತ್ತದೆ ಅಥವಾ ವಿಶೇಷವಾಗಿ ಕಾಲುಗಳಲ್ಲಿ ಜೋಮು ಇರುತ್ತದೆ
ಮೆನಿಂಜೈಟಿಸ್, ಇದರಲ್ಲಿ ಮೆದುಳು ಹಾಗೂ ಮೆದುಳು ಬಳ್ಳಿಯ ಉರಿಯೂತ ಉಂಟಾಗುತ್ತದೆ
ಪಾರ್ಶ್ವವಾಯು ಒಂದು ತೀವ್ರ ಲಕ್ಷಣಗಳಲ್ಲಿ ಒಂದಾಗಿದ್ದು ಇದು ಶಾಶ್ವತ ವಿಕಲಾಂಗತೆ ಮತ್ತು ಸಾವಿಗೆ ಕಾರಣವಾಗಬಹುದು. ಆದ್ದರಿಂದಲೇ ಇದು ಪೋಲಿಯೊ ರೋಗದ ಅತ್ಯಂತ ಗಂಭೀರ ಲಕ್ಷಣವಾಗಿದೆ.
ಪೋಲಿಯೊ ವೈರಸ್ ಅತ್ಯಂತ ಸಾಂಕ್ರಾಮಿಕ ಕಾಯಿಲೆಯಾಗಿದ್ದು ಇದು ಒಂದು ವ್ಯಕ್ತಿಯಿಂದ ಮತ್ತೊಬ್ಬ ವ್ಯಕ್ತಿಗೆ ಸುಲಭವಾಗಿ ಹರಡಬಲ್ಲದು. ಇದು ಈ ಕೆಳಗಿನ ರೀತಿಯಾಗಿ ಹರಡುತ್ತದೆ:
ಸೋಂಕಿತ ವ್ಯಕ್ತಿಯ ಮಲದೊಂದಿಗೆ ಸಂಪರ್ಕಕ್ಕೆ ಬಂದಾಗ
ಸೋಂಕಿತ ವ್ಯಕ್ತಿಯ ಸೀನು ಅಥವಾ ಕೆಮ್ಮಿನಿಂದ ಬರುವ ಹನಿಗಳು
ಒಬ್ಬ ಸೋಂಕಿತ ವ್ಯಕ್ತಿ ಲಕ್ಷಣಗಳು ಕಂಡುಬರುವ ಮುನ್ನವೇ ಅಥವಾ ಬಂದ ನಂತರದ ಎರಡು ವಾರಗಳವರೆಗೆ ವೈರಾಣುವನ್ನು ಇತರರಿಗೆ ಹರಡಬಹುದು. ಲಕ್ಷಣರಹಿತ ರೋಗಿಗಳು ಸಹ ಸೋಂಕನ್ನು ಹರಡಬಹುದು.
ಪೋಲಿಯೊ ಮಯಲೈಟಿಸ್ ಎಂಬ ರೋಗವು ಪೋಲಿಯೊ ವೈರಾಣುವಿನಿಂದ ಉಂಟಾಗುತ್ತಿದ್ದು ಇದನ್ನು ಸಾಮಾನ್ಯವಾಗಿ ಪೋಲಿಯೊ ಎಂದು ಕರೆಯಲಾಗುತ್ತದೆ. ಇದು ಪ್ರಮುಖವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅದರ ತೀವ್ರತೆಯನ್ನು ಆಧರಿಸಿ, ಇದು ಪಾರ್ಶ್ವವಾಯು ಮತ್ತು ಸಾವಿಗೆ ಕಾರಣವಾಗಬಹುದು. ಇವೆಲ್ಲದರ ಹೊರತಾಗಿ ಪೋಲಿಯೊ ಇಂದ ಬದುಕುಳಿದವರು ಪೋಸ್ಟ್ ಪೋಲಿಯೊ ಸಿಂಡ್ರೋಮ್ ನಿಂದ ಭಾದಿತರಾಗಿದ್ದಾರೆ. ಅವರು ಸೋಂಕು ಕಂಡುಬಂದ ಸುಮಾರು 15-40 ವರ್ಷಗಳ ನಂತರವೂ ಸ್ನಾಯು ನೋವು, ಆಯಾಸ ಮತ್ತು ಪಾರ್ಶ್ವವಾಯು ಸಮಸ್ಯೆಯನ್ನು ಅನುಭವಿಸಿದ್ದಾರೆ.
ಇಲ್ಲ, ಪೋಲಿಯೊಗೆ ಯಾವುದೇ ಚಿಕಿತ್ಸೆಯಿಲ್ಲ. ಆದರೆ ಸೂಕ್ತ ಲಸಿಕೆಯೊಂದಿಗೆ ಮಗುವಿನ ರೋಗನಿರೋಧಕತೆಯನ್ನು ಹೆಚ್ಚಿಸುವ ಮೂಲಕ ಪೋಲಿಯೊ ರೋಗವನ್ನು ನಿಯಂತ್ರಿಸಬಹುದು.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.
ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.