ಸದ್ಯ ಜಪಾನೀಸ್ ಎನ್ಸೆಫಲೈಟಿಸ್ ಗೆ ಯಾವುದೇ ಔಷಧಿಗಳಿಲ್ಲ. ಅದಾಗಿಯೂ, ಆಮ್ಲಜನಕ, ಫ್ಲೂಯಿಡ್, ಔಷಧಿಗಳು ಇತ್ಯಾದಿಗಳನ್ನು ಒಳಗೊಂಡಂತೆ ಲಕ್ಷಣಗಳ ಚಿಕಿತ್ಸೆಯಿಂದ ರೋಗಿಯು ಸೋಂಕಿನ ವಿರುದ್ಧ ಹೋರಾಡಬಹುದು.
You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.
Agree Agree Agree Stayಜಪಾನೀಸ್ ಎನ್ಸೆಫಲೈಟಿಸ್ ಸೋಂಕಿತ ಸೊಳ್ಳೆಯ ಕಡಿತದ ಮೂಲಕ ಹರಡುವ ವೈರಾಣುವಿನ ಸೋಂಕಾಗಿದೆ. ಇದನ್ನು ಲಸಿಕೆಯಿಂದ ತಡೆಗಟ್ಟಬಹುದಾಗಿದೆ.
ಒಂದುವೇಳೆ ನೀವು ಯಾವುದೇ ಲಸಿಕೆಗಳನ್ನು ನಿರ್ದಿಷ್ಟ ಸಮಯದಲ್ಲಿ ಹಾಕಿಸುವುದನ್ನು ಮರೆತಾಗ ಕ್ಯಾಚ್ ಅಪ್ ಲಸಿಕೆ(ವ್ಯಾಕ್ಸಿನೇಷನ್) ಗಾಗಿ ನಿಮ್ಮ ವೈದ್ಯರನ್ನು ಭೇಟಿಮಾಡಿ.
ಜಪಾನೀಸ್ ಎನ್ಸೆಫಲೈಟಿಸ್ ಲಸಿಕೆಯ ಕುರಿತು ಹೆಚ್ಚಿನ ಮಾಹಿತಿಗಾಗಿ ನಿಮ್ಮ ಮಕ್ಕಳ ವೈದ್ಯರನ್ನು ಭೇಟಿಯಾಗಿ.
ಜಪಾನೀಸ್ ಎನ್ಸೆಫಲೈಟಿಸ್ ಎಂಬುದು ಒಂದು ವೈರಾಣುವಿನ ಸೋಂಕಾಗಿದ್ದು ಇದು ಫ್ಲಾವಿವೈರಸ್ ನಿಂದ ಉಂಟಾಗುತ್ತದೆ. ಇದು ವೈರಾಣುವಿನಿಂದ ಸೋಂಕುಗೊಂಡ ಸೊಳ್ಳೆಯ ಕಡಿತದಿಂದ ಹರಡುತ್ತದೆ. ಈ ಸೋಂಕಿನ ಪ್ರಾಥಮಿಕ ಮೂಲವು ಫ್ಲಾವಿ ವೈರಸ್ ಹೊಂದಿರುವ ಹಂದಿಗಳು ಮತ್ತು ಪಕ್ಷಿಗಳಾಗಿದ್ದು, ಇದು ನಂತರ ಸೋಂಕಿತ ಪ್ರಾಣಿ ಅಥವಾ ಪಕ್ಷಿಯ ರಕ್ತವನ್ನು ಹೀರುವ ಸೊಳ್ಳೆಗೆ ವರ್ಗಾವಣೆಯಾಗುತ್ತದೆ. ಈ ರೋಗದ ತೀವ್ರ ಸ್ವರೂಪಗಳಲ್ಲಿ ಮೆದುಳಿನಲ್ಲಿ ಊತ ಅಥವಾ ಹಾನಿ ಉಂಟಾಗಿ ಶಾಶ್ವತ ಮೆದುಳು ಹಾನಿಗೆ ಕಾರಣವಾಗುತ್ತದೆ. ವೈರಾಣುವನ್ನು ಹೊಂದಿರುವ ಸೊಳ್ಳೆಗಳು ಕೆಸರು ಪ್ರದೇಶಗಳಲ್ಲಿ, ಹಂದಿ ಕೊಟ್ಟಿಗೆಗಳು ಮತ್ತು ಭತ್ತದ ಹೊಲಗಳನ್ನು ಒಳಗೊಂಡಂತೆ ಗ್ರಾಮೀಣ ಮತ್ತು ನಗರದ ಎರಡೂ ಉಷ್ಣವಲಯ ಪ್ರದೇಶಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ.
ಈ ವೈರಾಣು ಮಾನವನ ಸಂಪರ್ಕದಿಂದಾಗಲೀ ಅಥವಾ ಆಹಾರ ಅಥವಾ ಪಾನೀಯಗಳನ್ನು ಹಂಚಿಕೊಳ್ಳುವುದರಿಂದ ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.
ಕಾಯಿಲೆ ಬಂದ ಅನೇಕರಿಗೆ ಯಾವುದೇ ಲಕ್ಷಣಗಳು ಕಂಡುಬರುವುದಿಲ್ಲ ಅಥವಾ ಕಂಡರೂ ವಾಂತಿ ಅಥವಾ ವಾಕರಿಕೆ ರೀತಿಯ ಬಹಳ ಸೌಮ್ಯ ಸ್ವರೂಪದ್ದಾಗಿರುತ್ತದೆ. ಲಕ್ಷಣಗಳನ್ನು ಸಾಮಾನ್ಯವಾಗಿ ಫ್ಲೂ ಎಂದು ತಪ್ಪಾಗಿ ಅರ್ಥೈಸಲಾಗುತ್ತದೆ.
ಅದಾಗಿಯೂ, ಜಪಾನೀಸ್ ಎನ್ಸೆಫಲೈಟಿಸ್ ನಿಂದ ಬಳಲುತ್ತಿರುವ ಒಂದು ಸಣ್ಣ ಭಾಗದಷ್ಟು ಜನರು ಗಂಭೀರ ಸಮಸ್ಯೆಗಳನ್ನು ಅನುಭವಿಸುತ್ತಾರೆ ಮತ್ತು ಸೋಂಕು ಮೆದುಳಿಗೆ ಹರಡುತ್ತದೆ. ಬಹಳ ಅಪರೂಪವಾಗಿ, ತೀವ್ರ ಸ್ವರೂಪದ ಸೋಂಕಿನಲ್ಲಿ ಈ ಕೆಳಗಿನ ಲಕ್ಷಣಗಳನ್ನು ಅನುಭವಿಸುತ್ತಾರೆ:
ಒಂದುವೇಳೆ ಸೋಂಕು ಗಂಭೀರವಾಗಿದ್ದು, ರೋಗಿಯು ಬದುಕುಳಿದರೆ ಅವರ ಮೆದುಳಿಗೆ ಶಾಶ್ವತ ಹಾನಿಯಾಗುತ್ತದೆ, ಒಂದು ಅಥವಾ ಎರಡು ಕೈಕಾಲುಗಳಲ್ಲಿ ಪಾರ್ಶ್ವವಾಯು, ದುರ್ಬಲ ಸ್ನಾಯುಗಳು, ಸೆಳೆತ ಇತ್ಯಾದಿ ಸಮಸ್ಯೆಗಳನ್ನು ಅನುಭವಿಸುತ್ತಾರೆ
ಸಾಮಾನ್ಯವಾಗಿ ಜಪಾನೀಸ್ ಎನ್ಸೆಫಲೈಟಿಸ್ ಲಸಿಕೆಯನ್ನು 2 ತಿಂಗಳುಗಳಿಗಿಂತ ಮೇಲ್ಪಟ್ಟ ಮಕ್ಕಳಲ್ಲಿ ನೀಡಲು ಶಿಫಾರಸ್ಸು ಮಾಡಲಾಗುತ್ತದೆ.
ಅದಾಗಿಯೂ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರನ್ನು ಒಮ್ಮೆ ಭೇಟಿ ಮಾಡಿ.
ಲಸಿಕೆ ಪಡೆದ ವ್ಯಕ್ತಿಯು ಸೌಮ್ಯ ಮತ್ತು ಅಲ್ಪಾವಧಿ ಅಡ್ಡಪರಿಣಾಮಗಳನ್ನು ಅನುಭವಿಸುತ್ತಾರೆ. ಅವುಗಳೆಂದರೆ:
ಒಂದುವೇಳೆ ಅಡ್ಡ ಪರಿಣಾಮಗಳು ಮುಂದುವರೆದಲ್ಲಿ, ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ಸದ್ಯ ಜಪಾನೀಸ್ ಎನ್ಸೆಫಲೈಟಿಸ್ ಗೆ ಯಾವುದೇ ಔಷಧಿಗಳಿಲ್ಲ. ಅದಾಗಿಯೂ, ಆಮ್ಲಜನಕ, ಫ್ಲೂಯಿಡ್, ಔಷಧಿಗಳು ಇತ್ಯಾದಿಗಳನ್ನು ಒಳಗೊಂಡಂತೆ ಲಕ್ಷಣಗಳ ಚಿಕಿತ್ಸೆಯಿಂದ ರೋಗಿಯು ಸೋಂಕಿನ ವಿರುದ್ಧ ಹೋರಾಡಬಹುದು.
ಗ್ಲಾಕ್ಸೊ ಸ್ಮಿತ್‌ಕ್ಲೈನ್ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನಿಂದ ಸಾರ್ವಜನಿಕ ಜಾಗೃತಿ ಉಪಕ್ರಮ. ಡಾ. ಅನ್ನಿ ಬೆಸೆಂಟ್ ರಸ್ತೆ, ವರ್ಲಿ, ಮುಂಬೈ 400 030, ಭಾರತ.
ಈ ಕೈಪಿಡಿಯಲ್ಲಿ ಸಿಗುವ ಮಾಹಿತಿಯು ಕೇವಲ ಸಾಮಾನ್ಯ ಜಾಗೃತಿ ಉದ್ದೇಶಗಳಿಗಾಗಿ ಮಾತ್ರ ಆಗಿರುತ್ತದೆ. ಇದರಲ್ಲಿರುವ ಯಾವುದೇ ವಿಷಯವು ವೈದ್ಯರ ಸಲಹೆಯಲ್ಲ. ಇದಕ್ಕೆ ಸಂಬಂಧಿಸಿದಂತೆ ಯಾವುದೇ ವೈದ್ಯಕೀಯ ಸಂಬಂಧಿತ ವಿಚಾರಣೆಗಳಿಗಾಗಿ, ಯಾವುದೇ ಪ್ರಶ್ನೆಗಳಿಗಾಗಿ ಅಥವಾ ಸಂದೇಹಗಳಿಗಾಗಿ ನಿಮ್ಮ ವೈದ್ಯರನ್ನು ಭೇಟಿಯಾಗಿ. ಲಸಿಕೆಗೆ ಪಟ್ಟಿ ಮಾಡಿರುವ ಕಾಯಿಲೆಗಳು ಇಲ್ಲಿ ಪೂರ್ಣವಾಗಿಲ್ಲ, ಸಂಪೂರ್ಣ ಲಸಿಕಾ ವೇಳಾಪಟ್ಟಿಗಾಗಿ ನಿಮ್ಮ ಮಗುವಿನ ವೈದ್ಯರನ್ನು ಭೇಟಿ ಮಾಡಿ. ಈ ಕೈಪಿಡಿಯಲ್ಲಿ ತೋರಿಸಲಾಗುವ ವೈದ್ಯರು ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಯಲ್ಲಿ ಒಬ್ಬ ನಟ ಆಗಿರುತ್ತಾರೆ. ರೋಗ ಪ್ರತಿನಿಧಿಸುವ ಚಿತ್ರಗಳು/ ಐಕಾನ್ ಗಳು ಮತ್ತು ಅನಿಮೇಷನ್ ಕೇವಲ ಪ್ರಾತಿನಿಧ್ಯ ಉದ್ದೇಶಗಳಿಗಾಗಿ ಮಾತ್ರ.