ಹಿಬ್ ಸೋಂಕು ಸಾಮಾನ್ಯವಾಗಿ 5 ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತದೆ. ಹಿಮೋಫಿಲಸ್ ಇನ್ಫ್ಲುಯೆಂಜಾ ವಿಧ ಬಿ ರೋಗವನ್ನು ತಡೆಗಟ್ಟಲು ಇರುವ ಒಂದು ಉತ್ತಮ ಮಾರ್ಗವೆಂದರೆ ಅದು ಲಸಿಕೆ(ವ್ಯಾಕ್ಸಿನೇಷನ್). ಜೊತೆಗೆ ಹಿಬ್ ಒಂದು ಸಲಕ್ಕಿಂತ ಹೆಚ್ಚು ಸಮಯ ವ್ಯಕ್ತಿಗೆ ಸೋಂಕು ಉಂಟುಮಾಡಬಹುದು. ಹೀಗೆ, ಒಬ್ಬ ವ್ಯಕ್ತಿಯು ಸೋಂಕಿನಿಂದ ಈಗಾಗಲೇ ಗುಣಮುಖನಾಗಿದ್ದರೂ ಸಹ ಲಸಿಕೆ ಹಾಕಿಸಲು ಶಿಫಾರಸ್ಸು ಮಾಡಲಾಗಿದೆ.