ಕ್ಯಾನ್ಸರ್ ಪೂರ್ವ ಗುಳ್ಳೆಗಳು ಗರ್ಭಕಂಠದ ಕ್ಯಾನ್ಸರ್ ನ ಲಕ್ಷಣಗಳು ಆಗಿರಬಹುದು. ಇದನ್ನು ಹೊರತು ಪಡಿಸಿ, ಗರ್ಭಕಂಠದ ಕ್ಯಾನ್ಸರ್ ನ ಆರಂಭಿಕ ರೋಗಲಕ್ಷಣಗಳೆಂದರೆ:
ತಿಂಗಳ ಮುಟ್ಟಿನ ನಡುವೆ ಸ್ಪಾಟಿಂಗ್ ಅಥವಾ ಸ್ವಲ್ಪ ಪ್ರಮಾಣದಲ್ಲಿ ರಕ್ತ ಸ್ರಾವ ಕಂಡುಬರುವುದು
ಯೋನಿಯಿಂದ ಅಧಿಕ, ಅನಿಯಮಿತ ಮತ್ತು ದುರ್ಗಂಧವಿರುವ ಸ್ರಾವ ಕಂಡುಬರುವುದು
ಋತುಬಂಧದ ನಂತರ ಸ್ಪಾಟಿಂಗ್ ಅಥವಾ ರಕ್ತಸ್ರಾವ ಕಂಡುಬರುವುದು
ಲೈಂಗಿಕ ಸಂಭೋಗದ ನಂತರ ರಕ್ತಸ್ರಾವ ಉಂಟಾಗುವುದು
ಗರ್ಭಕಂಠದ ಕ್ಯಾನ್ಸರ್ ನಲ್ಲಿನ ಗಂಭೀರ ಸಮಸ್ಯೆಗಳೆಂದರೆ:
ಯೋನಿಯಲ್ಲಿ ದುರ್ಗಂಧದ ಸ್ರಾವ
ಯೋನಿಯಲ್ಲಿ ಅಸ್ವಸ್ಥತೆ
ಬೆನ್ನು, ಸೊಂಟ, ಒಂದು ಅಥವಾ ಎರಡೂ ಕಾಲುಗಳಲ್ಲಿ ನಿರಂತರ ನೋವು
ಒಂದು ಅಥವಾ ಎರಡೂ ಕಾಲುಗಳಲ್ಲಿ ನೋವು
ಒಂದುವೇಳೆ ಕ್ಯಾನ್ಸರ್ ಗರ್ಭಕಂಠದಿಂದ ದೇಹದ ಇತರ ಭಾಗಗಳಿಗೆ ಹರಡಿದಾಗ ಇದು ಇತರ ಲಕ್ಷಣಗಳನ್ನು ತೋರಿಸುತ್ತದೆ.