ಪೋಲಿಯೊ ಎಂದರೇನು ಮತ್ತು ನನ್ನ ಮಗುವಿಗೆ ಅದು ಹೇಗೆ ಬರಬಹುದು?
ಪೋಲಿಯೋ ಅತ್ಯಂತ ಸೋಂಕುಕಾರಕ ರೋಗವಾಗಿದ್ದು, ವೈರಸ್ ನಿಂದ ಹರಡುತ್ತದೆ. ಇದು ನರಮಂಡಲದ ಮೇಲೆ ಸೋಂಕು ಉಂಟುಮಾಡುವುದಲ್ಲದೆ, ಪಾರ್ಶ್ವವಾಯು, ಉಸಿರಾಟದ ತೊಂದರೆ ಮತ್ತು ಕೆಲವೊಮ್ಮೆ ಸಾವನ್ನು ಉಂಟುಮಾಡಬಹುದು. ಪೋಲಿಯೊ ಮುಖ್ಯವಾಗಿ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಬಹಳ ಸಾಂಕ್ರಾಮಿಕವಾಗಿದೆ. ಇದು ವ್ಯಕ್ತಿಯಿಂದ ವ್ಯಕ್ತಿಗೆ ಮುಖ್ಯವಾಗಿ ಮಲ-ಮೌಖಿಕ ಮಾರ್ಗದ ಮೂಲಕ ಅಥವಾ ಸಾಮಾನ್ಯ ವಾಹಕದ ಮೂಲಕ ಹರಡುತ್ತದೆ (ಉದಾಹರಣೆಗೆ, ಕಲುಷಿತ ನೀರು ಅಥವಾ ಆಹಾರ). ಅಲ್ಲದೆ, ನಿಮ್ಮ ಮಗುವು ಕಲುಷಿತವಾದ ಆಟಿಕೆಗಳಂತಹ ವಸ್ತುಗಳನ್ನು ಅದರ ಬಾಯಿಗೆ ಹಾಕಿಕೊಂಡರೆ, ಅವನು ಸೋಂಕಿಗೆ ಒಳಗಾಗಬಹುದು.
ನನ್ನ ಮಗುವಿಗೆ ಪೋಲಿಯೊ ಬಂದರೆ ಏನಾಗಬಹುದು?
ಸಿಡಿಸಿ ಪ್ರಕಾರ, ಪೋಲಿಯೊವೈರಸ್ ಸೋಂಕಿರುವ 4 ರಲ್ಲಿ 1 ಜನರಿಗೆ ಜ್ವರದಂತಹ ರೋಗಲಕ್ಷಣಗಳು ಇರುತ್ತಿದ್ದು ಇದರಲ್ಲಿ ಗಂಟಲು ನೋವು, ಜ್ವರ, ದಣಿವು, ವಾಕರಿಕೆ, ತಲೆನೋವು ಮತ್ತು ಹೊಟ್ಟೆ ನೋವು ಸೇರಿರಬಹುದು. ರೋಗಿಗಳ ಒಂದು ಭಾಗವು ಮೆದುಳು ಮತ್ತು ಬೆನ್ನುಹುರಿಯನ್ನು ಒಳಗೊಂಡ ರೋಗಲಕ್ಷಣಗಳನ್ನು ಬೆಳೆಸಿಕೊಳ್ಳಬಹುದು. ಪಾರ್ಶ್ವವಾಯು ಪೋಲಿಯೊಗೆ ಸಂಬಂಧಿಸಿದ ಅತ್ಯಂತ ತೀವ್ರವಾದ ರೋಗಲಕ್ಷಣವಾಗಿದೆ. ಇದು ಶಾಶ್ವತ ಅಂಗವೈಕಲ್ಯ ಮತ್ತು ಸಾವಿಗೆ ಕಾರಣವಾಗಬಹುದು.
ನನ್ನ ನವಜಾತ ಶಿಶುವನ್ನು ಪೋಲಿಯೊದಿಂದ ರಕ್ಷಿಸುವ ಮಾರ್ಗಗಳು ಯಾವುವು?
ಪೋಲಿಯೊ ತಡೆಗಟ್ಟಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದರೆ ಲಸಿಕೆಯಾಗಿದೆ. ಇತರ ಕ್ರಮಗಳಲ್ಲಿ ಉತ್ತಮ ಸ್ವಚ್ಛತೆ ಮತ್ತು ಸರಿಯಾದ ನೈರ್ಮಲ್ಯಗಳು ಸೇರಿವೆ. ಪೋಲಿಯೊ ವಿರುದ್ಧ ಲಸಿಕೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನಿಮ್ಮ ವೈದ್ಯರೊಂದಿಗೆ ಮಾತನಾಡಿ.