You are now leaving GSK’s website and are going to a website that is not operated/controlled by GSK. Though we feel it could be useful to you,we are not responsible for the content/service or availability of linked sites. You are therefore mindful of these risks and have decided to go ahead.
Agree Stayಮಾಹಿತಿಯನ್ನು ಪಡೆಯುತ್ತಿರುವುದು:
ಸರ್ಪಸುತ್ತು, ಇದನ್ನು ಹರ್ಪಿಸ್ ಜೊಸ್ಟರ್ ಎಂದೂ ಕರೆಯಲಾಗುತ್ತದೆ.ಇದು ವಾರಿಸೆಲ್ಲಾ ಜೊಸ್ಟರ್ ವೈರಸ್ ನ ಮರುಸಕ್ರಿಯೆಯ ಪರಿಣಾಮದಿಂದಾಗಿ ಉಂಟಾಗುತ್ತದೆ. ಸಿಡುಬು ರೋಗ ಬಂದ ಮೇಲೆ ಅಥವಾ ವಾರಿಸೆಲ್ಲಾ ಜೊಸ್ಟರ್ ವೈರಸ್ ಸೋಂಕು ತಗುಲಿದ ನಂತರ, ಈ ವೈರಸ್ ಜೀವನವಿಡೀ ದೇಹದಲ್ಲಿ ಸುಪ್ತ ಸ್ಥಿತಿಯಲ್ಲಿರುತ್ತದೆ. ವಯಸ್ಸಿನೊಂದಿಗೆ, ದೇಹದ ರೋಗನಿರೋಧಕ ಶಕ್ತಿ ಕುಂದುತ್ತದೆ, ಇದರಿಂದ ನಿಷ್ಕ್ರಿಯ ವೈರಸ್ ಮತ್ತೊಮ್ಮೆ ಸಕ್ರಿಯೆಗೊಂಡು ಸರ್ಪಸುತ್ತು ಉಂಟಾಗುತ್ತದೆ.
ಆದ್ದರಿಂದ ವೃದ್ಧರಲ್ಲಿ ಸರ್ಪಸುತ್ತು ಬರುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಇದು ಸಾಮಾನ್ಯವಾಗಿ ಬಹಳ ನೋವುಳ್ಳ, ನೀರು ತುಂಬಿದ ಗುಳ್ಳೆಗಳಾಗಿದ್ದು, ದೇಹದ ಅಥವಾ ಮುಖದ ಒಂದು ಭಾಗದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತದೆ.
ಸಿಡುಬು ರೋಗ ಅಥವಾ ಅಮ್ಮ ಬರಲು ವಾರಿಸೆಲ್ಲಾ ಜೊಸ್ಟರ್ ವೈರಸ್ ಪ್ರಮುಖ ಕಾರಣ. ಒಬ್ಬ ವ್ಯಕ್ತಿಗೆ ಸಿಡುಬು ಬಂದಾಗ, ಅವನ ದೇಹದಲ್ಲಿ ವೈರಸ್ ಉಳಿದುಕೊಂಡು ನಿಷ್ಕ್ರಿಯವಾಗಿರುತ್ತದೆ. ಕೆಲವು ವರ್ಷಗಳ ನಂತರ ಆ ದೇಹದೊಳಗಿನ ವೈರಸ್ ಮತ್ತೊಮ್ಮೆ ಸಕ್ರಿಯಗೊಂಡಾಗ ಸರ್ಪಸುತ್ತು ಉಂಟಾಗುತ್ತದೆ. ಇದುವರೆಗೂ ವೈರಸ್ ಯಾವ ಕಾರಣದಿಂದ ಸಕ್ರಿಯಗೊಳ್ಳುತ್ತದೆ ಎಂದು ವಿಜ್ಞಾನಿಗಳು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಆದರೂ, ಅದರ ಅನೇಕ ಕಾರಣಗಳು ಇರಬಹುದು. ವ್ಯಕ್ತಿಗೆ ವಯಸ್ಸಾಗುತ್ತಿದ್ದಂತೆ ಅವನ ರೋಗ ನಿರೋಧಕ ಶಕ್ತಿ ಕುಂದುತ್ತದೆ. ರೋಗ ನಿರೋಧಕ ಶಕ್ತಿ ಕಡಿಮೆಯಾದಾಗ ಅದು ವೈರಸ್ ಅನ್ನು ಹಿಮ್ಮೆಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ ವೃದ್ಧರಲ್ಲಿ ಸರ್ಪಸುತ್ತು ಬರುವ ಹೆಚ್ಚಿನ ಸಾಧ್ಯತೆಗಳಿರುತ್ತವೆ.
ಮೊದಲಿಗೆ, ಸಿಡುಬು ಬಂದಿರುವ ವ್ಯಕ್ತಿಗಳಲ್ಲಿ ಈಗಾಗಲೇ ಸರ್ಪಸುತ್ತು ಬರುವ ವೈರಸ್ ಇರುತ್ತದೆ. ಕೆಲವರು ಈಗಾಗಲೇ ಸಿಡುಬು ರೋಗದಿಂದ ಬಳಲಿರುತ್ತಾರೆ ಆದರೆ ಬಂದಿರುವುದು ಅವರಿಗೆ ನೆನಪಿರುವುದಿಲ್ಲ ಅಥವಾ ತಿಳಿದಿರುವುದಿಲ್ಲ. ಎರಡೂ ರೀತಿಯಲ್ಲಿಯೂ, ವ್ಯಕ್ತಿಯು ಎಷ್ಟೇ ಆರೋಗ್ಯವಾಗಿ ಕಂಡರೂ ಸಹ ಅವರ ದೇಹದೊಳಗಿರುವ ವೈರಸ್ ಮರುಸಕ್ರಿಯೆಗೊಂಡಾಗ ಸರ್ಪಸುತ್ತು ಉಂಟಾಗಬಹುದು.
ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಸರ್ಪಸುತ್ತು ಬರುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಮತ್ತು ವಯಸ್ಸಾದಂತೆ ರೋಗನಿರೋಧಕ ಶಕ್ತಿಯೂ ಸಹ ನೈಸರ್ಗಿಕವಾಗಿ ಕ್ಷೀಣಿಸುವ ಕಾರಣ, 50 ವರ್ಷಕ್ಕಿಂತ ಮೇಲ್ಪಟ್ಟ ಜನರಲ್ಲಿ ಸರ್ಪಸುತ್ತು ಬರುವ ಹೆಚ್ಚಿನ ಸಾಧ್ಯತೆ ಇರುತ್ತದೆ.
ಹಿರಿಯ ವಯೋವೃದ್ಧರೂ ಸಹ ಪೋಸ್ಟ್-ಹೆರ್ಪೆಟಿಕ್ ನ್ಯೂರಾಲ್ಜಿಯಾ(PHN) ರೀತಿಯ ಗಂಭೀರ ಸಮಸ್ಯೆಗಳನ್ನು ಹೊಂದುವ ಹೆಚ್ಚಿನ ಸಾಧ್ಯತೆಯನ್ನು ಹೊಂದಿದ್ದಾರೆ.
ಸಾಮಾನ್ಯವಾಗಿ ಸರ್ಪಸುತ್ತು ಸೋಂಕಿನಲ್ಲಿ ನೀರು ತುಂಬಿದ ನೋವಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ ಮತ್ತು 10 ರಿಂದ 15 ದಿನಗಳಲ್ಲಿ ಚಿಪ್ಪುಗಟ್ಟಿ 2 ರಿಂದ 4 ವಾರಗಳಲ್ಲಿ ಮಾಯವಾಗುತ್ತದೆ. ಇವು ಸಾಮಾನ್ಯವಾಗಿ ದೇಹದ ಅಥವಾ ಮುಖದ ಒಂದು ಭಾಗದ ಮೇಲೆ ಮಾತ್ರ ಕಾಣಿಸಿಕೊಳ್ಳುತ್ತವೆ. ಗುಳ್ಳೆ ಕಾಣಿಸಿಕೊಳ್ಳುವ ಜಾಗದಲ್ಲಿ 48-72 ಗಂಟೆಗಳ ಮೊದಲು, ತೀವ್ರ ನೋವು, ತುರಿಕೆ, ಜೋಮು ಇರುತ್ತದೆ.
ಸರ್ಪಸುತ್ತು ಉಂಟು ಮಾಡುವ ವೈರಸ್ ಈಗಾಗಲೇ ಸಿಡುಬು ರೋಗದಿಂದ ದೇಹದೊಳಗೆ ಸುಪ್ತ ಸ್ಥಿತಿಯಲ್ಲಿರುತ್ತದೆ. ಇದು ಮರುಸಕ್ರಿಯಗೊಳ್ಳುವವರೆಗೆ ಸುಪ್ತ ಸ್ಥಿತಿಯಲ್ಲಿರುತ್ತದೆ. ಆದ್ದರಿಂದ ಇದು ಒಬ್ಬರಿಂದ ಮತ್ತೊಬ್ಬರಿಗೆ ಹರಡುವುದಿಲ್ಲ.
ಆದಾಗಿಯೂ, ಒಂದುವೇಳೆ ಮತ್ತೊಬ್ಬ ವ್ಯಕ್ತಿಯು ಇದುವರೆಗೆ ಸಿಡುಬು ರೋಗವನ್ನು ಹೊಂದಿಲ್ಲವಾದರೆ ಅಥವಾ ಅದರ ವಿರುದ್ಧ ರಕ್ಷಣೆಯನ್ನು ಪಡೆಯದಿದ್ದರೆ ಅವರು ಇದರ ಸೋಂಕನ್ನು ಹೊಂದಬಹುದು. ಒಬ್ಬ ವ್ಯಕ್ತಿಯು ಸರ್ಪಸುತ್ತು ಇರುವ ವ್ಯಕ್ತಿಯ ಗುಳ್ಳೆಗಳೊಂದಿಗೆ ನೇರ ಸಂಪರ್ಕಕ್ಕೆ ಬಂದಾಗ ಸಿಡುಬು ರೋಗ ಕಾಣಿಸಿಕೊಳ್ಳಬಹುದು.
ಹೌದು, ಒತ್ತಡದಿಂದ ಸರ್ಪಸುತ್ತು ಬರುವ ಸಾಧ್ಯತೆ ಹೆಚ್ಚಾಗಬಹುದು. ಆದರೆ, ಮೊದಲೇ ಹೇಳಿದಂತೆ ಸರ್ಪಸುತ್ತು ಬರಲು ವಯಸ್ಸು ಬಹಳ ಮುಖ್ಯ ಕಾರಣ. ಹೆಚ್ಚಿನ ಪ್ರಕರಣಗಳಲ್ಲಿ, ಸರ್ಪಸುತ್ತು 50 ವರ್ಷಗಳು ಅಥವಾ ಅದಕ್ಕಿಂತ ಮೇಲ್ಪಟ್ಟ ವಯಸ್ಸಿವರಲ್ಲಿ ಉಂಟಾಗುತ್ತದೆ.
ಹೆಚ್ಚು ತಿಳಿಯಲು ದಯವಿಟ್ಟು ನಿಮ್ಮ ವೈದ್ಯರೊಡನೆ ಮಾತನಾಡಿ.
ಸಿಡುಬು ಒಂದು ತೀವ್ರ ಸಾಂಕ್ರಾಮಿಕ ರೋಗವಾಗಿದ್ದು, ಇದರಲ್ಲಿ ಇಡೀ ದೇಹದ ಮೇಲೆ ನೀರಿನ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಜೊತೆಗೆ ತುರಿಕೆ ಮತ್ತು ಜ್ವರ ಸಹ ಇರುತ್ತದೆ. ಸಿಡುಬು ವೈರಸ್ ಮರುಸಕ್ರಿಯೆಗೊಂಡು, ಸರ್ಪಸುತ್ತು ಉಂಟಾಗುತ್ತದೆ. ಸರ್ಪಸುತ್ತು ಇರುವವರಲ್ಲಿ ಕೆಲವು ವಾರಗಳವರೆಗೆ ದೇಹದ ಒಂದು ಭಾಗದಲ್ಲಿ ನೋವು, ತುರಿಕೆ, ಜೋಮು ಇರಬಹುದು.
ಇಲ್ಲ, ಒಂದುವೇಳೆ ಸಿಡುಬು ಮೊದಲು ಬಂದಿಲ್ಲವಾದರೆ, ಅವರಿಗೆ ಸರ್ಪಸುತ್ತು ಬರುವ ಸಾಧ್ಯತೆ ಇಲ್ಲ. ಆದರೆ ಕೆಲವೊಮ್ಮೆ ಕೆಲವರ ಅರಿವಿಲ್ಲದೆಯೇ ಅವರು ವೈರಸ್ ನ ಸೋಂಕಿಗೆ ತುತ್ತಾಗಿರುತ್ತಾರೆ. ಇಂತಹ ಸಂದರ್ಭಗಳಲ್ಲಿ, ಹಿರಿಯ ವೃದ್ಧರಲ್ಲಿ ಸರ್ಪಸುತ್ತು ಬರುವ ಹೆಚ್ಚಿನ ಅಪಾಯ ಇರುತ್ತದೆ.
ಹರ್ಪಿಸ್ ಜೊಸ್ಟರ್ ಆಪ್ತಾಲ್ಮಿಕಸ್ ಒಂದು ಸರ್ಪಸುತ್ತು ಸೋಂಕಾಗಿದ್ದು ಇದು ಕಣ್ಣು ಮತ್ತು ಕಣ್ಣಿನ ಪ್ರದೇಶವನ್ನು ಬಾಧಿಸುತ್ತದೆ. ಇದರ ಲಕ್ಷಣಗಳಲ್ಲಿ ಎಲ್ಲಾ ಅಂಗಾಂಶಗಳಲ್ಲಿ ನೋವಿನಿಂದ ಕೂಡಿದ ಉರಿಯೂತ ಮತ್ತು ಹಣೆಯಲ್ಲಿ ಗುಳ್ಳೆಗಳು ಇರುತ್ತವೆ.
ಸಾಮಾನ್ಯವಾಗಿ, ಅನೇಕರು ಸರ್ಪಸುತ್ತು ಸಮಸ್ಯೆಯಿಂದ ಸಂಪೂರ್ಣವಾಗಿ ಗುಣಮುಖರಾಗುತ್ತಾರೆ ಆದರೆ ಕೆಲವರು ಮಾತ್ರ ತೀವ್ರ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು.
PHN ಒಂದು ಆರೋಗ್ಯದ ತೀವ್ರ ಗಂಭೀರ ಸ್ವರೂಪವಾಗಿದ್ದು, ಇದು ಸರ್ಪಸುತ್ತು ಇರುವ ಶೇಖಡಾ 25% ಜನರಲ್ಲಿ ಉಂಟಾಗುತ್ತವೆ. PHN ನ ಒಂದು ಮುಖ್ಯ ಲಕ್ಷಣವೆಂದರೆ ನರಗಳ ನೋವು, ಇದು ಸರ್ಪಸುತ್ತಿನ ಗುಳ್ಳೆಗಳು ಮಾಯವಾದ ತಿಂಗಳುಗಳು ಅಥವಾ ವರ್ಷಗಳ ಬಳಿಕವೂ ಸಹ ಇರುತ್ತದೆ. ನೋವು ಸಾಮಾನ್ಯವಾಗಿ ಬಾಧಿತ ಪ್ರದೇಶದಲ್ಲಿಯೇ ಉಳಿದುಕೊಳ್ಳುತ್ತದೆ.
ಹರ್ಪಿಸ್ ಜೊಸ್ಟರ್ ಆಪ್ತಾಲ್ಮಿಕಸ್(HZO) ಇರುವ ಶೇಖಡಾ 50% ರಷ್ಟು ಜನರಲ್ಲಿ ಕಣ್ಣಿನ ಸಮಸ್ಯೆಗಳು ಉದ್ಭವವಾಗುತ್ತವೆ. ಇದರಲ್ಲಿ ಗುಳ್ಳೆಗಳು ಕಣ್ಣು ಅಥವಾ ಮೂಗಿನ ಭಾಗದಲ್ಲಿ ಕಾಣಿಸಿಕೊಳ್ಳುತ್ತವೆ. HZO ಇರುವ ಶೇಖಡಾ 30% ಜನರಲ್ಲಿ ಎರಡು ದೃಷ್ಟಿ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಕಣ್ಣಿನ ಆಪ್ಟಿಕ್ ನರದ ಹಾನಿಯಾಗುವ ಸಾಧ್ಯತೆ ಬಹಳ ಅಪರೂಪ ಆದರೆ HZO ಇರುವ ಶೇಖಡಾ 0.5% ಜನರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳಬಹುದು.
ಎನ್ಸೆಫಲೈಟಿಸ್(ಮೆದುಳಿನ ಊತ) ರೀತಿಯ ನರ ಸಂಬಂಧಿತ ದೋಷಗಳು ಅಪರೂಪವಾದರೂ ಸರ್ಪಸುತ್ತು ಇರುವ ಶೇಖಡಾ 1% ವರೆಗಿನ ಜನರಲ್ಲಿ ಇದು ಕಾಣಿಸಿಕೊಳ್ಳಬಹುದು.
ಬಹಳ ಅಪರೂಪದ ಪ್ರಕರಣಗಳಲ್ಲಿ, ಸರ್ಪಸುತ್ತು ವೈರಸ್ ಶ್ರವಣ ವ್ಯವಸ್ಥೆಯಲ್ಲಿ ಮರುಸಕ್ರಿಯಗೊಳ್ಳಬಹುದು ಮತ್ತು ಹರ್ಪಿಸ್ ಜೊಸ್ಟರ್ ಒಟಿಕಸ್ ಉಂಟಾಗಬಹುದು. ಲಕ್ಷಣಗಳಲ್ಲಿ ಶ್ರವಣ ಸಮಸ್ಯೆ, ತಲೆ ಸುತ್ತು, ಕಿವಿ ಬಾರಿಸುವುದು, ಮುಖದ ಸ್ನಾಯುಗಳ ತೀವ್ರ ನೋವು ಮತ್ತು ಮುಖದ ಸ್ನಾಯುಗಳ ಪಾರ್ಶ್ವವಾಯು(ರಾಮಸೇ ಹಂಟ್ ಸಿಂಡ್ರೋಮ್) ಒಳಗೊಂಡಿರುತ್ತದೆ. ಇನ್ನು ಸರ್ಪಸುತ್ತು ಇರುವ ಶೇಖಡಾ 1% ಜನರಲ್ಲಿ ಸಮತೋಲನ ಸಮಸ್ಯೆ ಕಾಣಿಸಿಕೊಳ್ಳಬಹುದು.
ಸರ್ಪಸುತ್ತು ಸೋಂಕಿನಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಪಟ್ಟಿ ಇಷ್ಟಕ್ಕೆ ನಿಲ್ಲುವುದಿಲ್ಲ. ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಿಮ್ಮ ವೈದ್ಯರನ್ನು ಭೇಟಿ ಮಾಡಿ.
ಸಾಮಾನ್ಯವಾಗಿ ಸರ್ಪಸುತ್ತು ಬಹಳ ನೋವು ಕೊಡುವ ನೀರು ತುಂಬಿದ ಗುಳ್ಳೆಗಳಾಗಿದ್ದು, ಇದು ನರದ ಪಥದಲ್ಲಿಯೇ ದೇಹದ ಬಲ ಭಾಗ ಅಥವಾ ಎಡ ಭಾಗದ ಸುತ್ತ ಸಾಲಾಗಿ ಕಾಣಿಸಿಕೊಳ್ಳುತ್ತವೆ. ಇದು ದೇಹದ ಮಧ್ಯ ಭಾಗ, ಭುಜ, ತೊಡೆಗಳು ಅಥವಾ ತಲೆ(ಕಣ್ಣು ಅಥವಾ ಕಿವಿಗಳನ್ನು ಒಳಗೊಂಡಂತೆ) ಭಾಗಗಳಲ್ಲಿ ಕಾಣಿಸಿಕೊಳ್ಳಬಹುದು. ಈ ನೋವನ್ನು ಜನರು#ವಿಪರೀತ ನೋವು, #ಚುಚ್ಚುವ ನೋವು ಅಥವಾ#ವಿದ್ಯುತ್ ತಂತಿ ಹರಿದಂತೆ ರೀತಿಯ#ನೋವು ಎಂದು ವಿವರಿಸಿದ್ದಾರೆ.ನೋವಿನ ಕಾರಣ ಬಟ್ಟೆ ಧರಿಸುವುದು, ನಡೆಯುವುದು ಮತ್ತು ನಿದ್ದೆ ಮಾಡುವ ರೀತಿಯ ದೈನಂದಿನ ಚಟುವಟಿಕೆಗಳಲ್ಲಿ ತೊಂದರೆ ಉಂಟಾಗುತ್ತದೆ.
ಸಾಮಾನ್ಯವಾಗಿ ಸರ್ಪಸುತ್ತು ಸೋಂಕು ದೇಹದ ಸಣ್ಣ ಭಾಗವನ್ನು ಬಾಧಿಸುವ ಚರ್ಮದ ಗುಳ್ಳೆಯಾಗಿ ಆರಂಭಿಸುತ್ತದೆ. ಸೋಂಕಿರುವ ವ್ಯಕ್ತಿಯು ಸಾಮಾನ್ಯವಾಗಿ ಗುಳ್ಳೆ ಬರುವ 48-72ಗಂಟೆಗಳ ಮೊದಲು ಬಾಧಿತ ಪ್ರದೇಶಗಳಲ್ಲಿ ವಿದ್ಯುತ್ ಶಾಕ್# ಅಥವಾ ಮೊಳೆ ಚುಚ್ಚಿದಂತೆ# ಅಥವಾ ಕುದಿಯುವ ನೀರಿಂದ ಉಂಟಾದ ಸುಟ್ಟ ಗಾಯ#ರೀತಿಯಾಗಿ ನೋವು, ತುರಿಕೆ, ಜೋಮು ಅನುಭವಿಸುತ್ತಾನೆ.
ಇಷ್ಟಲ್ಲದೆ ಸೋಂಕಿದ್ದಾಗ ಜ್ವರ, ತಲೆನೋವು, ನಡುಕ ಅಥವಾ ಉದರ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಹಾಗಾದರೆ ಒಂದುವೇಳೆ ನಿಮ್ಮ ಪೋಷಕರು ಅಥವಾ ಮನೆಯ ವೃದ್ಧರು ಈ ಕೆಳಗಿನ ಯಾವುದೇ ಲಕ್ಷಣಗಳನ್ನು ಅನುಭವಿಸುತಿದ್ದಲ್ಲಿ, ದಯವಿಟ್ಟು ಅವರನ್ನು ತಕ್ಷಣವೇ ವೈದ್ಯರ ಬಳಿಗೆ ಕರೆದುಕೊಂಡು ಹೋಗಿ.
ಒಂದುವೇಳೆ ನಿಮಗೆ ಸರ್ಪಸುತ್ತು ಬಂದರೆ, ನೀವು ಅದನ್ನು ತಡೆಗಟ್ಟಲು ಮತ್ತು ಅದರ ಕುರಿತು ಹೆಚ್ಚು ತಿಳಿಯಲು ನಿಮ್ಮ ವೈದ್ಯರೊಡನೆ ಚರ್ಚಿಸಿ.
ಸರ್ಪಸುತ್ತು ತಡೆಗಟ್ಟುವಿಕೆ ಆಯ್ಕೆಗಳು
ದೇಹದಲ್ಲಿ ಸಿಡುಬು ಸೋಂಕು ಉಂಟಾದ ನಂತರ ಅಲ್ಲಿಯೇ ಉಳಿದುಕೊಳ್ಳುವ ವೈರಸ್ ನ ಮರುಸಕ್ರಿಯೆಯಿಂದಾಗಿ ಸರ್ಪಸುತ್ತು ಉಂಟಾಗುತ್ತದೆ. ಆದ್ದರಿಂದ, ಒಂದುವೇಳೆ ಒಬ್ಬ ವ್ಯಕ್ತಿಗೆ ಇದುವರೆಗೆ ಸಿಡುಬು ರೋಗ ಬಂದಿಲ್ಲದಿದ್ದರೆ, ಅವರಿಗೆಸಿಡುಬು ಅಥವಾ ಸರ್ಪಸುತ್ತು ಸೋಂಕಿರುವ ವ್ಯಕ್ತಿಗಳಿಂದ ದೂರ ಇರುವಂತೆ ಹೇಳಿ. ಜೊತೆಗೆ, ಸಿಡುಬು ಬರದಂತೆ ತಡೆಗಟ್ಟಲು ಅವರು ಕೆಮ್ಮು ಮತ್ತು ಕೈ ನೈರ್ಮಲ್ಯ ಮುಂಜಾಗ್ರತೆ ಕ್ರಮಗಳನ್ನು ಅನುಸರಿಸುತ್ತಿದ್ದಾರೆ ಎಂದು ಖಾತ್ರಿಪಡಿಸಿಕೊಳ್ಳಿ.
ಲಸಿಕೆಯಿಂದ ಸರ್ಪಸುತ್ತು ಬರುವುದನ್ನು ತಡೆಗಟ್ಟಬಹುದು. ನೀವು ಅದನ್ನು ತಡೆಗಟ್ಟಲು ಮತ್ತು ಅದರ ಕುರಿತು ಹೆಚ್ಚು ತಿಳಿಯಲು ನಿಮ್ಮ ವೈದ್ಯರೊಡನೆ ಚರ್ಚಿಸಿ.
ಲಸಿಕೆಯು ನಿಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ ಹಾಗಾಗಿ ಇದು ಸರ್ಪಸುತ್ತು ವೈರಸ್ ವಿರುದ್ಧ ಹೋರಾಡಲು ಸಾಧ್ಯವಾಗುತ್ತದೆ ಮತ್ತು ಇದು ವೈರಸ್ ನ ಮರುಸಕ್ರಿಯ ಪ್ರಕ್ರಿಯೆಯನ್ನು ಸಹ ತಡೆಗಟ್ಟುತ್ತದೆ.
ನಿಮ್ಮ ಲಕ್ಷಣಗಳನ್ನು ಆಧರಿಸಿ ವೈರಸ್ ಅನ್ನು ದುರ್ಬಲಗೊಳಿಸುವುದು ಮತ್ತು/ಅಥವಾ ನೋವನ್ನು ಶಮನ ಮಾಡುವುದನ್ನು ಒಳಗೊಂಡಂತೆ ಚಿಕಿತ್ಸೆಯಿಂದ ಕಾಯಿಲೆಯ ತೀವ್ರತೆ ಮತ್ತು ಅವಧಿಯನ್ನು ಕಡಿಮೆ ಮಾಡಬಹುದು.
ಒಂದುವೇಳೆ ನಿಮಗೆ ಸರ್ಪಸುತ್ತು ಬಂದಿದೆ ಎಂದು ನಿಮಗನಿಸಿದರೆ, ದಯವಿಟ್ಟು ಸಾಧ್ಯವಾದಷ್ಟು ಬೇಗ ನಿಮ್ಮ ವೈದ್ಯರೊಡನೆ ಚರ್ಚಿಸಿ. ಅವರು ನಿಮ್ಮ ಲಕ್ಷಣಗಳ ತೀವ್ರತೆ ಮತ್ತು ಅವಧಿಯನ್ನು ಕಡಿಮೆ ಮಾಡಲು ಸೂಕ್ತ ಔಷಧಿಗಳನ್ನು ಬರೆದುಕೊಡಬಹುದು.
ಲಕ್ಷಣಗಳನ್ನು ನಿರ್ವಹಣೆ ಮಾಡಲು ಸಾಮಾನ್ಯ ಸಲಹೆ:
ಸರ್ಪಸುತ್ತು ತಡೆಗಟ್ಟುವಿಕೆ ಮತ್ತು ಅದರ ಕುರಿತು ಹೆಚ್ಚು ತಿಳಿಯಲು ನಿಮ್ಮ ವೈದ್ಯರೊಡನೆ ಚರ್ಚಿಸಿ
ಉಲ್ಲೇಖಗಳು